Thursday, April 9, 2009

ನನ್ನ ಫೋಟೋ




Posted by Picasa

Wednesday, April 1, 2009

ಶ್ರೀ ಬಿ.ಎಸ್.ಯಡಿಯೂರಪ್ಪನವರು ತುಳಿದ ಹಾದಿ ಅದ್ಹೇಗೆ ತಪ್ಪಾಗಲು ಸಾಧ್ಯ?

ಇನ್ನೂರ ಇಪ್ಪತ್ನಾಲ್ಕು ಸದಸ್ಯರ ವಿಧಾಸಭೆಯಲ್ಲಿ ಬಹುಮತಕ್ಕೆ ೩ ಸಂಖ್ಯೆ ಕಡಿಮೆ ಬಿದ್ದ ಕಾರಣ ಬೆಂಬಲ ಕಲೆಹಾಕುವ ಸಲುವಾಗಿ ಜನಾದೇಶವನ್ನು ಬಲಗೊಳಿಸುವ ಹಾಗೂ ಬಹುಮುಖ್ಯವಾದ ರಾಜಕೀಯ ಸ್ಥಿರತೆಯ ಸಲುವಾಗಿ ಇತರ ಪಕ್ಷಗಳ ಶಾಸಕರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಬೇಕಾಗಿ ಬಂತು.
ಈ ಎಲ್ಲಾ ಬೆಳವಣಿಗೆಗಳನ್ನು ಪಕ್ಷಾಂತರ ನಿಷೇಧ ಕಾಯಿದೆ ಹಾಗೂ ದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ಕ್ಷಿತಿಜದ ಹಿನ್ನೆಲೆಯನ್ನು ಪರಾಮರ್ಶಿಸಬೇಕಾಗಿ ಬಂದಿದೆ. ಪಕ್ಷಾಂತರವನ್ನು ಮೊಟ್ಟ ಮೊದಲ ಬಾರಿಗೆ ತಡೆಯಲು ಯತ್ನಿಸಿದ್ದು ಪ್ರಧಾನಿ ರಾಜೀವ ಗಾಂಧಿಯವರ ಸರ್ಕಾರ. ೧೯೮೫ರಲ್ಲಿ ಪಕ್ಷಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದ ರಾಜೀವ ಗಾಂಧಿ ಸರ್ಕಾರ, ಆ ಕಾಯಿದೆಯನ್ನು ಸಂವಿಧಾನದ ೧೦ನೇ ಶೆಡ್ಯೂಲ್‌ಗೆ ಸೇರಿಸಿತು. ಬಿಡಿ ಶಾಸಕರು ಪಕ್ಷಾಂತರಗೊಳ್ಳುವುದಕ್ಕೆ ನಿಷೇಧ ಹೇರಿದ ಕಾಯಿದೆ ಶಾಸಕರ ಸಗಟು ಮಾರಾಟಕ್ಕೆ ಕಾನೂನಿನ ಮುದ್ರೆಯೊತ್ತಿತ್ತು. ಇಂತಹ ಲೋಪ ಹಾಗೂ ಅದರ ಬಗ್ಗೆ ವ್ಯಕ್ತವಾದ ಟೀಕೆಗಳ ಹಿನ್ನೆಲೆಯಲ್ಲಿ ೨೦೦೩ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಸಂವಿಧಾನದ ೯೧ನೇ ತಿದ್ದುಪಡಿ ಮೂಲಕ ಕಾಯಿದೆಗೆ ಮಾರ್ಪಾಡು ಮಾಡಲು ಮುಂದಾಯಿತು. ಈ ತಿದ್ದುಪಡಿ ಪಕ್ಷ ಒಡೆಯುವ ಅವಕಾಶಕ್ಕೆ ಕಡಿವಾಣ ಹಾಕಿ ಶಾಸಕರು ಪಕ್ಷಾಂತರಗೊಳ್ಳುವುದಕ್ಕೆ ಸಂಪೂರ್ಣ ತಡೆಯೊಡ್ಡಿತು. ಈ ಮಧ್ಯೆ ವೀರಪ್ಪ ಮೊಯ್ಲಿ ನೇತೃತ್ವದ ಎರಡನೇ ಆಡಳಿತಾತ್ಮಕ ಸುಧಾರಣಾ ಆಯೋಗ ಸಂವಿಧಾನದ ೯೧ನೇ ತಿದ್ದುಪಡಿಯನ್ನು ಸ್ವಾಗತಿಸಿತು. ಅಲ್ಲದೆ ಬಿಡಿ ಇಲ್ಲವೆ ಗುಂಪಾಗಿ ಪಕ್ಷ ಬದಲಿಸಲು ಬಯಸುವ ಶಾಸಕರು ತಮ್ಮ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಬೇಕು ಹಾಗೂ ಹೊಸದಾಗಿ ಜನಾದೇಶವನ್ನು ಪಡೆದುಕೊಳ್ಳಬೇಕು. ಇಂತಹ ಕ್ರಮ ತಮ್ಮ ಹೊಲಸು ರಾಜಕೀಯ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಒಂದು ಗಮನಾರ್ಹ ಬೆಳವಣಿಗೆ ಎಂಬ ಅಭಿಪ್ರಾಯ ಕೇಳಿಬಂದಿತು. ಪಕ್ಷವನ್ನು ವಿಭಜಿಸಲು ಹಾಗೂ ಸಾಮೂಹಿಕವಾಗಿ ಪಕ್ಷಾಂತರಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ಹಿಂದಿನ ಕಾಯಿದೆ ಅವಕಾಶವಾದಿ ರಾಜಕೀಯ ಹಾಗೂ ಪಕ್ಷ ಒಡೆಯುವ ಬೆಳವಣಿಗೆಗಳಿಗೆ ಕಾರಣವಾಗಿತ್ತು. ಆದರೆ, ೯೧ನೇ ತಿದ್ದುಪಡಿ ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಿತು ಎಂಬ ಅಭಿಪ್ರಾಯ ಕೇಳಿಬಂತು. ಇತ್ತ ಸಂವಿಧಾನ ಪರಾಮರ್ಶೆಗಾಗಿ ನೇಮಕಗೊಂಡಿದ್ದ ಸಮಿತಿ ಮಾಡಿದ ಶಿಫಾರಸ್ಸಿನ ಹಿನ್ನಲೆಯಲ್ಲಿ ೯೧ನೇ ತಿದ್ದುಪಡಿಯನ್ನು ಜಾರಿಗೆ ತರಲಾಗಿತ್ತು. ಸಂವಿಧಾನದ ೧೦ನೇ ಶೆಡ್ಯೂಲ್‌ಗೆ ಸೂಕ್ತ ಮಾರ್ಪಾಡು ಮಾಡುವ ಮೂಲಕ ೯೧ನೇ ತಿದ್ದುಪಡಿಯನ್ನು ಅದರಲ್ಲಿ ಸೇರಿಸಬೇಕು ಎಂದು ಸಮಿತಿ ಸೂಚಿಸಿತ್ತು. ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಎಂ.ಎನ್.ವೆಂಕಟಾಚಲಯ್ಯ ನೇತೃತ್ವದ ಈ ಸಂವಿಧಾನ ಪರಾಮರ್ಶೆ ಸಮಿತಿ ‘ಸಚಿವರ ಸಂಖ್ಯೆ’ಗೂ ಕಡಿವಾಣ ಹಾಕಬೇಕು ಎಂದು ಸೂಚನೆ ನೀಡಿತು. ಈ ಎಲ್ಲ ಅಂಶಗಳನ್ನು ೯೧ನೇ ತಿದ್ದುಪಡಿ ಮೂಲಕ ಜಾರಿಗೆ ತರಲಾಯಿತು.
ಕಳೆದ ಮೇನಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ೧೧೦ ಸ್ಥಾನಗಳನ್ನು ಗೆದ್ದುಕೊಂಡ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ವಿಧಾನಸಭೆಯಲ್ಲಿ ಬಹುಮತಕ್ಕೆ ೩ ಶಾಸಕರ ಕೊರತೆ ಎದುರಾಯಿತು. ಇಂತಹ ಅಂತಿಮ ಪಟ್ಟಿಯನ್ನು ನೋಡಿದಾಗ ಬಿಜೆಪಿ ಏನು ಮಾಡಬಹುದಿತ್ತು? ಕೈಚೆಲ್ಲಿ ಹೊಸ ಚುನಾವಣೆಗೆ ಮತ್ತೆ ಆದೇಶ ನೀಡಬೇಕು ಎಂದು ಒತ್ತಾಯಿಸಬೇಕಿತ್ತೇ? ಅಥವಾ ಸಂವಿಧಾನದಲ್ಲೇ ಕಲ್ಪಿಸಿರುವ ಮಾರ್ಗಗಳನ್ನು ಬಳಸಿಕೊಂಡು ಬೆರಳೆಣಿಕೆ ಸಂಖ್ಯೆಯ ಶಾಸಕರನ್ನು ಸೆಳೆದುಕೊಳ್ಳಬೇಕಿತ್ತೇ?
ಮಂತ್ರಿ ಪದವಿ ಅಥವಾ ಅದಕ್ಕೆ ಸiನಾದ ಸ್ಥಾನಗಳನ್ನು ನೀಡುವ ಆಸೆ ತೋರಿಸಿ ಕೂಡಲೇ ಆರು ಸ್ವತಂತ್ರ ಶಾಸಕರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಹಾಗಾಗಿ ಬಿಜೆಪಿಗೆ ಬಹುಮತ ಲಭ್ಯವಾಯಿತು. ಹಾಗೆ ಸ್ವತಂತ್ರ ಶಾಸಕರಿಗೆ ಆಹ್ವಾನ ನೀಡಿದ್ದು ಕಾನೂನು ಹಾಗೂ ನೈತಿಕ ದೃಷ್ಟಿಯಲ್ಲಿ ಖಂಡಿತ ತಪ್ಪಾಗಲಿಲ್ಲ.
ಎರಡನೇ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ದೇಶಾದ್ಯಂತ ಕೇವಲ ೧೨ ರಾಜಕೀಯ ಪಕ್ಷಗಳಿದ್ದವು. ಆದರೆ ಅರ್ಧ ಶತಮಾನ ಕಳೆದ ನಂತರ ನಮ್ಮ ರಾಜಕೀಯ ಪಕ್ಷಗಳ ಸಂಖ್ಯೆ ೪೨ಕ್ಕೇರಿದೆ. ಈ ರೀತಿಯ ಹೆಚ್ಚಳ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಲ್ಲಿ ಒಡಕು, ವ್ಯಕ್ತಿಗತ ಸಂಘರ್ಷಗಳಿಗೆ ಎಡೆಮಾಡಿಕೊಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಶರದ್ ಪವಾರ್, ಕರುಣಾಕರನ್, ರಾಮ್‌ವಿಲಾಸ ಪಾಸ್ವಾನ್, ಉಮಾಭಾರತಿ ಮುಂತಾದವರ ಪಕ್ಷಗಳಿಗೂ ತಲೆಯೆತ್ತಿವೆ. ಮುಂಬರುವ ವರ್ಷಗಳಲ್ಲಿ ರಾಜಕೀಯ ಪಕ್ಷಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆಯೇ ಹೊರತು ಕಡಿಮೆಯಾಗುವ ಲಕ್ಷಣಗಳಿಲ್ಲ. ರಾಜಕೀಯ ಪಕ್ಷಗಳ ನಡುವಿನ ಇಂತಹ ಒಡಕುಗಳು ಮೂರ್‍ನಾಲ್ಕು ವಿಧದ ವಿಭಜನೆಗಳಿಗೆ ದಾರಿ ಮಾಡಿಕೊಟ್ಟಿದೆ. ಆದ್ದರಿಂದ, ಮತಗಳು ಹರಿದು ಹಂಚಿಹೋಗಿ ರಾಜ್ಯಗಳು ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತ್ತಿವೆ.
ಕೆಲವು ಶತಮಾನಗಳ ಹಿಂದೆ ಈ ರೀತಿಯ ಪರಿಸ್ಥಿತಿ ಇರಲಿಲ್ಲ. ಸಂಸತ್ ಅಥವಾ ವಿಧಾನಸಭೆ ಚುನಾವಣೆಯ ನಂತರ ಸ್ಪಷ್ಟ ಜನಾದೇಶ ಲಭ್ಯವಾಗದೇ ಇರುವಂತಹ ಸಂದರ್ಭಗಳು ತೀರಾ ವಿರಳವಾಗಿದ್ದವು. ಆದರೆ, ಇಂದು ಮಿಲಿಜುಲಿ ಜನಾದೇಶವೇ ನಿಯಮವಾಗಿಬಿಟ್ಟಿದೆ. ಇಂತಹ ಅಸ್ಥಿರ ವಾತಾವರಣ ಹಾಗೂ ೯೧ನೇ ತಿದ್ದುಪಡಿಯ ಅಡೆತಡೆಯ ಎದುರು ಒಂದು ಸ್ಥಿರ ಸರ್ಕಾರವನ್ನು ನೀಡಲು ರಾಜಕೀಯ ಪಕ್ಷ ಅಥವಾ ಮೈತ್ರಿಕೂಟಗಳು ಹೇಗೆತಾನೇ ಬಹುಮತವನ್ನು ಸಾಧಿಸುತ್ತವೆ? ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಳ್ಳಬೇಕಾಗಿದೆ. ಎರಡನೆಯದಾಗಿ ಕಳೆದ ಮೇನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ನಂತರ ಸೃಷ್ಠಿಯಾದಂತಹ ಸನ್ನಿವೇಶಗಳಲ್ಲಿ ಏನು ಮಾಡಬೇಕು? ಸಾರ್ವಜನಿಕರ ಹಣ ಮತ್ತು ಶ್ರಮವನ್ನು ವ್ಯಯಮಾಡಿ ಹೊಸದಾಗಿ ವಿಧಾನಸಭೆಗೆ ಚುನಾವಣೆಯನ್ನು ಘೋಷಣೆ ಮಾಡಬೇಕೆ? ಅಥವಾ ಕೆಲವು ಸ್ಥಾನಗಳಿಗೆ ಮರು ಚುನಾವಣೆಯಾಗುವಂತೆ ಮಾಡುವ ಮೂಲಕ ಮತದಾರರಿಗೆ ಜನಾದೇಶವನ್ನು ಸರಿಪಡಿಸಲು ಅವಕಾಶ ಮಾಡಿಕೊಡಬೇಕೆ?
ಈ ಹಿನ್ನೆಲೆಯಲ್ಲಿ ದೃಷ್ಠಿಹಾಯಿಸಿದಾಗ ಸ್ವತಂತ್ರ ಶಾಸಕರನ್ನು ತೆಕ್ಕೆಗೆ ಸೆಳೆದುಕೊಂಡ ಹಾಗೂ ಪ್ರತಿಪಕ್ಷಗಳ ಶಾಸಕರಿಗೆ ಆಮಿಷ ತೋರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಜನಾದೇಶ ಪಡೆದುಕೊಳ್ಳಲು ಮುಂದಾಗುವಂತೆ ಮಾಡಿದ ಬಿ.ಎಸ್.ಯಡಿಯೂರಪ್ಪನವರ ಕ್ರಮವನ್ನು ಖಂಡಿತ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಹಾಲಿ ಪರಿಸ್ಥಿತಿಯಲ್ಲಿ ಬಿ.ಎಸ್.ಯಡಿಯೂರಪ್ಪನವರು ಮಾಡಿದ್ದು ಕಾನೂನು ಹಾಗೂ ನೈತಿಕವಾಗಿಯೂ ಸೂಕ್ತ ಕ್ರಮ. ಒಂದು ವೇಳೆ ಪ್ರಜಾಪ್ರತಿನಿಧಿ ಪ್ರಕ್ರಿಯೆಗೆ ತ್ವರಿತ ಹಾಗೂ ಸಮಗ್ರ ಸುಧಾರಣೆಯನ್ನು ತರದೇ ಹೋದರೆ ರಾಜಕೀಯ ಅಸ್ಥಿರತೆ ಸಾಮಾನ್ಯವಾಗುತ್ತದೆಯೇ ಹೊರತು ವಿರಳವಾಗುವುದಿಲ್ಲ. ಆಗ ರಾಜಕೀಯ ನಾಯಕರು ಆಡಳಿತದಲ್ಲಿ ಸ್ಥಿರತೆಯನ್ನು ತರಲು ಈಗ ಬಿ.ಎಸ್.ಯಡಿಯೂರಪ್ಪನವರು ಪಠಿಸುತ್ತಿರುವ ಮಂತ್ರವನ್ನೇ ಪಠಿಸಬೇಕಾಗುತ್ತದೆ.
- - - - -